ಬಸ್ ಸೇವೆಗಳು  
ವೊಲ್ವೋ ವಾಯು ವಜ್ರ ವಿಮಾನ ನಿಲ್ದಾಣ ಸೇವೆಗಳು
ವೊಲ್ವೋ ವಜ್ರ ಸೇವೆಗಳು
ಬಿಗ್-೧೦ ಸೇವೆಗಳು
ಸುವರ್ಣ ಸೇವೆಗಳು
ಪುಷ್ಪಕ್ ಸೇವೆಗಳು
ವಿಶೇಷ ಸೇವೆಗಳು
ಸಾಮಾನ್ಯ ಸೇವೆಗಳು
ಮೆಟ್ರೊ ಫೀಡರ್ ಮತ್ತು ಇತರೆ ಸೇವೆಗಳು
     
ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳು

ಸಂಚಾರ ಮತ್ತು ಸಾಗಣೆ ನಿರ್ವಹಣಾ ಕೇಂದ್ರ (TTMC)

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಜವಹರಲಾಲ್ ನೆಹರು ರಾಷ್ಟ್ರೀಯ ನಗರ ಪುನರುತ್ಥಾನ ಕ್ರಿಯಾ ಯೋಜನೆಗೆ (Jn Nurm) ಅನುಗುಣವಾಗಿ ಕರ್ನಾಟಕ ಸರ್ಕಾರವು ಅಂಗೀಕರಿಸಿರುವ ಸಮಗ್ರ ಸಂಚಾರ ಮತ್ತು ಸಾರಿಗೆ ಯೋಜನೆ (CTP) ಹಾಗೂ ಬೆಂ.ಮ.ಸಾ.ಸಂಸ್ಥೆಯ ಕಾರ್ಯ ಯೋಜನೆಯಲ್ಲಿ ಯೋಜಿಸಿರುವಂತೆ ಬೆಂಗಳೂರು ನಗರದ ಸಾರಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸುವ ಅಂಶಗಳನ್ನೊಳಗೊಂಡಂತೆ 45 ಸಂಚಾರ ಮತ್ತು ಸಾಗಣೆ ನಿರ್ವಹಣಾ ಕೇಂದ್ರ (TTMC) ಗಳನ್ನು ನಿರ್ಮಿಸಲು ಯೋಜಿಸಿದೆ. ಈ ಯೋಜನೆಯು ಪ್ರಯಾಣಿಕರಿಗಾಗಿ ಹೆಚ್ಚಿನ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಒದಗಿಸುವ ಗುರಿಯೊಂದಿಗೆ ಬಸ್ ನಿಲ್ದಾಣ, ಬಸ್ ನಿರ್ವಹಣಾ ಸೌಕರ್ಯ, ಸಾರ್ವಜನಿಕ ಸೇವಾ ಸೌಲಭ್ಯಗಳು, ಸ್ವಂತ ವಾಹನ ನಿಲುಗಡೆ ಹಾಗೂ ಸಾರ್ವಜನಿಕ ವಾಹನ ಪ್ರಯಾಣದಿಂದ ಸಾರಿಗೆಯ ಕೇಂದ್ರಬಿಂದುವಾಗಿ ಸಂಪರ್ಕ ಸಾಧನಗಳ ಬದಲಿ ವ್ಯವಸ್ಥೆಯನ್ನು ಕಲ್ಪಿಸುವುದಲ್ಲದೆ, ಸಂಸ್ಥೆಯ ದೂರದೃಷ್ಠಿಗೆ ಪ್ರತೀಕವಾಗಿ ಸಂಚಾರ ದಟ್ಟಣೆ ಹಾಗೂ ಪರಿಸರ (ವಾಯುಮಾಲಿನ್ಯಗಳಂತಹ) ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ.

ಸಾರಿಗೆ ವ್ಯವಸ್ಥೆಯಲ್ಲಿ ನವೀನತೆಯನ್ನು ಕಲ್ಪಿಸುವ ಮಾದರಿಯಾಗಿ Jn Nurm ಯೋಜನೆಯಡಿಯಲ್ಲಿ ಬೆಂ.ಮ.ಸಾ.ಸಂಸ್ಥೆಯ ಜಯನಗರ, ಶಾಂತಿನಗರ, ಕೋರಮಂಗಲ, ವೈಟ್ ಫೀಲ್ಡ್ (ITPL), ವಿಜಯನಗರ, ಕೆಂಗೇರಿ, ಬನಶಂಕರಿ, ಯಶವಂತಪುರ ದೊಮ್ಮಲೂರು ಮತ್ತು ಬನ್ನೇರುಘಟ್ಟ ಈ 10 ಸ್ಥಳಗಳಲ್ಲಿ ಸಂಚಾರ ಮತ್ತು ಸಾಗಣೆ ವ್ಯವಸ್ಥಾ ಕೇಂದ್ರಗಳ ನಿರ್ಮಾಣಕ್ಕೆ ಅನುಮೋದನೆ ದೊರಕಿರುತ್ತದೆ. ಈ ಯೋಜನೆಗಳನ್ನು ರೂ.440/- ಕೋಟಿಗಳ ಯೋಜನಾ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಈ ಎಲ್ಲಾ ಕಾಮಗಾರಿಗಳನ್ನು ಜುಲೈ-೨೦೧೦ ರ ವೇಳೆಗೆ ಪೂರ್ಣಗೊಳಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಈ ನರ್ಮ್ ಯೋಜನೆಯಡಿಯಲ್ಲಿನ ಯೋಜನೆಗಳಿಗೆ ಭಾರತ ಸರ್ಕಾರವು ಶೇಕಡ ೩೫% ಮತ್ತು ಕರ್ನಾಟಕ ಸರ್ಕಾರವು ಶೇಕಡ 15 ರಷ್ಟು ಅನುದಾನದ ರೂಪದಲ್ಲಿ ಆರ್ಥಿಕ ನೆರವು ನೀಡುತ್ತಿದ್ದು, ಉಳಿದ ಶೇಕಡಾ 50 ರಷ್ಟು ಯೋಜನಾ ವೆಚ್ಚವನ್ನು ಬೆಂ.ಮ.ಸಾ.ಸಂಸ್ಥೆಯೇ ಭರಿಸಲಿದೆ.

ಮುಂದುವರೆದಂತೆ, ಬಾಕಿ ಉಳಿದ ಉದ್ದೇಶಿತ 35 ಸಂಚಾರ ಮತ್ತು ಸಾಗಣೆ ವ್ಯವಸ್ಥಾ ಕೇಂದ್ರಗಳ ಪೈಕಿ ಎರಡನೆಯ ಹಂತದಲ್ಲಿ 11 ಇಂತಹ ಯೋಜನೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (PPP) ಕೈಗೆತ್ತಿಕೊಳ್ಳುವ ವಿಶ್ಲೇಷಣಿಯನ್ನು ಪರಾಂಬರಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು.

ಪರಿಷ್ಕರಣೆ ಮಾಡಿದ ದಿನಾಂಕ : Thursday, 23 Jul 2009 11:25:55 PM

| ಮುಖಪುಟ | ಬಸ್ಸನ್ನು ಹುಡುಕಿ | ಬಸ್ ಪಾಸುಗಳು | ಲಾಟರಿ ಫಲಿತಾಂಶ | ಟೆಂಡರ್ | ಬಾಡಿಗೆ | ಉದ್ಯೋಗಾವಕಾಶ | ಪ್ರತ್ಯುತ್ತರ | ನಮ್ನನ್ನು ಸಂಪರ್ಕಿಸಿ |
Copyright © 2009 BMTC. All rights reserved. Powered By Bhasinsoft India Ltd.