ಬಸ್ ಸೇವೆಗಳು  
ವೊಲ್ವೋ ವಾಯು ವಜ್ರ ವಿಮಾನ ನಿಲ್ದಾಣ ಸೇವೆಗಳು
ವೊಲ್ವೋ ವಜ್ರ ಸೇವೆಗಳು
ಬಿಗ್-೧೦ ಸೇವೆಗಳು
ಸುವರ್ಣ ಸೇವೆಗಳು
ಪುಷ್ಪಕ್ ಸೇವೆಗಳು
ವಿಶೇಷ ಸೇವೆಗಳು
ಸಾಮಾನ್ಯ ಸೇವೆಗಳು
ಮೆಟ್ರೊ ಫೀಡರ್ ಮತ್ತು ಇತರೆ ಸೇವೆಗಳು
     
ದೃಷ್ಠಿಕೋನ

ದೃಷ್ಠಿಕೋನ

ಎಲ್ಲಾ ನಾಗರೀಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸೇವಾ ಮೌಲ್ಯವನ್ನು ಹೆಚ್ಚಿಸುವ ಮೂಲಕ ಬೆಂಗಳೂರು ಮಹಾನಗರ ಪ್ರದೇಶದ ಜನತೆಗೆ ವಿಶ್ವ ಮಟ್ಟದ ಉತ್ಕೃಷ್ಠ ಸಾರಿಗೆ ಸೇವೆಗಳನ್ನು ನೀಡುವುದು.

 

ಬೆಂ.ಮ.ಸಾ.ಸಂಸ್ಥೆ : ಸಂಕ್ಷಿಪ್ತ  ವಿವರ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ನಗರ ಹಾಗೂ ಹೊರವಲಯದ ಜನತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನೀಡುವ ಏಕೈಕ ಗುರಿಯೊಂದಿಗೆ 1997ರಲ್ಲಿ ಅಸ್ತಿತ್ವಕ್ಕೆ ಬಂದಿತು. ಪ್ರತಿಯೊಬ್ಬರಿಗೂ ಸುರಕ್ಷಿತ, ನಂಬಿಕೆಯ, ಸ್ವಚ್ಛ ಹಾಗೂ ಕೈಗೆಟಕುವಂತಹ ಸಾರಿಗೆಯನ್ನು ನೀಡುವುದು ಸಂಸ್ಥೆಯ ಧ್ಯೇಯವಾಗಿದೆ. ಬೆಂಗಳೂರು ನಗರದಲ್ಲಿ ಸುಮಾರು 4.2 ಮಿಲಿಯನ್‌ಗಿಂತಲೂ ಅಧಿಕ ಪ್ರಯಾಣಿಕರನ್ನು ಸಾಗಿಸುವ ನಗರದ ಏಕೈಕ ಸಾರಿಗೆ ವ್ಯವಸ್ಥೆಯಾಗಿ ಮೇಲ್ಪಂಕ್ತಿಯಲ್ಲಿ ಮುನ್ನಡೆಯುತ್ತಿದೆ. ಸಂಸ್ಥೆಯು ಸುಮಾರು 6092 ಕ್ಕಿಂತಲೂ ಅಧಿಕ ವಾಹನ ಬಲವನ್ನು ಹೊಂದಿದ್ದು, ಸುಮಾರು 32000 ಸಿಬ್ಬಂದಿ ಬಲದೊಂದಿಗೆ ನಗರದ ಕೇಂದ್ರ ಭಾಗದಿಂದ 36 ಕಿ.ಮೀ. ತ್ರಿಜ್ಯದ ವ್ಯಾಪ್ತಿಯಲ್ಲಿ ಸಾರಿಗೆ ಸೇವೆ ನೀಡುತ್ತಿದೆ. ಸಂಸ್ಥೆಯು ಸುಮಾರು 583 ನಗರ ಹಾಗೂ 1785 ಹೊರವಲಯ ಮಾರ್ಗಗಳಲ್ಲಿ 13 ಲಕ್ಷ ಕಿ.ಮೀ ಹಾಗೂ 79083 ಸುತ್ತುವಳಿಗಳಲ್ಲಿ ಬಸ್ಸುಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಸಂಸ್ಥೆಯು ಬೆಂಗಳೂರು ನಗರ ಹಾಗೂ ಹೊರವಲಯದ ಜನತೆಯ ಸಂಚಾರದ ಆವಶ್ಯಕತೆಗಳಿಗೆ ಅನುಗುಣವಾಗಿ ಸೇವೆಯನ್ನು ನೀಡುತ್ತಿದೆ. ವಿಭಿನ್ನ ಸ್ತರಗಳ ಪ್ರಯಾಣಿಕರಿದ್ದಾಗ್ಯೂ ಸಂಸ್ಥೆಯು ನಗರದ ಉದ್ದಗಲ ಹಾಗೂ ಮೂಲೆಮೂಲೆಗೂ ಸಂಚರಿಸಿ ಸಾರ್ವಜನಿಕ ಸಾರಿಗೆಯನ್ನು ಒಂದು ಆಕರ್ಷಕ ಆಯ್ಕೆಯನ್ನಾಗಿ ಮಾಡಿದೆ. ಸಾರ್ವಜನಿಕ ಸಾರಿಗೆಯಲ್ಲಿ ಸಂಸ್ಥೆಯು ಹೊಂದಿರುವ ಮಹತ್ವವು ಸಂಸ್ಥೆಯ ದಕ್ಷ ಆಡಳಿತ, ಮಾನವ ಸಂಪನ್ಮೂಲ ಮತ್ತು ಪರಿಸರ ನೀತಿಗಳ ಆಳವಡಿಕೆಗೆ ಒಂದು ಪುರಾವೆಯಾಗಿದೆ. ಅಲ್ಲದೆ ಸಂಸ್ಥೆಯು ಮಾಹಿತಿ ತಂತ್ರಜ್ಞಾನ ಹಾಗೂ ಪ್ರಯಾಣಿಕ ಮಾಹಿತಿ ವ್ಯವಸ್ಥೆಯ ಸಮ್ಮಿಲನದೊಂದಿಗೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯವನ್ನು ನೀಡಲು ಶ್ರಮಿಸುತ್ತಿದೆ. ಇದು ಸಂಸ್ಥೆಯ ಬಸ್ ಆಚರಣೆಯ ಉಸ್ತುವಾರಿ ಮತ್ತು ಸೇವಾ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಸಾರ್ವಜನಿಕರ ಕ್ರಿಯಾತ್ಮಕ ಸ್ಪಂದನೆಯು ಸಂಸ್ಥೆಯ ಸೇವಾ ಅಚರಣೆಯನ್ನು ಉತ್ತಮಪಡಿಸಲು ನೆರವಾಗುತ್ತಿದೆ. ಸಂಸ್ಥೆಯು ಸದ್ಯೋಭವಿಷ್ಯದಲ್ಲಿ ಪ್ರಯಾಣಿಕರ ಅಹವಾಲುಗಳು ಹಾಗೂ ಪ್ರತಿಕ್ರಿಯೆಗಳನ್ನು ಆಲಿಸಲು ಹಾಗೂ ಪರಿಹರಿಸಲು ಸಂಪರ್ಕ ಕೊಂಡಿಯಾಗಿ ಒಂದು ವಿಶ್ವಮಟ್ಟದ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದೆ.

ಕಾರ್ಯಸೂಚಿ

ಕಾರ್ಯಸೂಚಿ 

ಬೆಮಸಾಸಂಸ್ಥೆಯು ಬೆಂಗಳೂರಿನ ಜನತೆಗೆ ಮಿತವ್ಯಯ ಮತ್ತು ಪರಿಸರ ಸ್ನೇಹಿ, ಸುರಕ್ಷಿತ ಮತ್ತು ಸುಸ್ಥಿರ ಸಾರಿಗೆ ಸೇವೆ ನೀಡುವುದಕ್ಕೆ ಬದ್ಧವಾಗಿದ್ದು, ಯೋಜನೆಗಳನ್ನು ರೂಪಿಸಿಕೊಂಡು, ಈ ಕೆಳಕಂಡ ರಂಗಗಳಲ್ಲಿ ನಿರ್ವಹಣಾ ಸಾಧನೆಯನ್ನು ನಿರಂತರವಾಗಿ ಉತ್ತಮಪಡಿಸಿಕೊಳ್ಳುವುದು.

  • ತಾಂತ್ರಿಕ ಮತ್ತು ಕಾರ್ಯಾಚರಣೆ ರಂಗಗಳಲ್ಲಿ ನಿರಂತರ ಅಭಿವೃದ್ಧಿ
  • ಸಾರಿಗೆ ಸೇವೆಗಳಲ್ಲಿ ದಕ್ಷತೆಯನ್ನು ಸಾಧಿಸುವುದಕ್ಕಾಗಿ, ಸಾರಿಗೆ ಕ್ಷೇತ್ರದಲ್ಲಿ ನವೀನ ನಿರ್ವಹಣಾ ನೀತಿಗಳನ್ನು ಅಭಿವೃದ್ಧಿಪಡಿಸಿ, ಪ್ರಯೋಗಕ್ಕೆ ಒಳಪಡಿಸಿ ಅವುಗಳನ್ನು ಅನುಷ್ಠಾನಗೊಳಿಸುವುದು.
  • ಸಿಬ್ಬಂದಿ ವರ್ಗದಲ್ಲಿ ಕೌಶಲ್ಯ ಹೆಚ್ಚಳ ಮತ್ತು ಗ್ರಾಹಕ ನಿರ್ವಹಣೆ ಸ್ವಭಾವಗಳಲ್ಲಿ ಸಕಾರಾತ್ಮಕ ಬದಲಾವಣೆ ತರುವುದು
  • ಸಾರ್ವಜನಿಕರ ಸಲಹೆಗಳ ಆಧಾರದ ಮೇಲೆ ಸಂಸ್ಥೆಯ ಬಸ್ಸುಗಳ ಆಚರಣೆಯನ್ನು ಉತ್ತಮ ಪಡಿಸುವುದು. 


ಕೆಳಗೆ ತಿಳಿಸಿರುವ ಸೇವೆಗಳನ್ನು ಕೈಗೊಳ್ಳುವ ಮೂಲಕ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದೆ :

  1. ನಗರದ ಸುತ್ತಮುತ್ತಲಿನ ಹೊರವಲಯ ಪ್ರದೇಶಗಳನ್ನು ಕೆಂಪು ಫಲಕದ ಬಸ್ಸುಗಳ ವ್ಯವಸ್ಥಿತ ಆಚರಣೆಯ ಮೂಲಕ ಸಂಪರ್ಕ ಕಲ್ಪಿಸುತ್ತಿದೆ.
  2. ನಗರದ ಎಲ್ಲಾ ಪ್ರಮುಖ ಜನನಿಬಿಡ ಸ್ಥಳಗಳಿಗೆ ಕಪ್ಪು ಹಲಗೆ ಬಸ್ಸುಗಳ ಸಂಚಾರವನ್ನು ಒದಗಿಸುತ್ತಿದ್ದೇವೆ.
  3. ಕನಿಷ್ಟ ನಿಲುಗಡೆಯುಳ್ಳ ಬಸ್ಸುಗಳನ್ನು ಆಚರಣೆ ಮಾಡುವ ಮೂಲಕ ಪ್ರಯಾಣಿಕರ ಅಮೂಲ್ಯವಾದ ಸಮಯವನ್ನು ಉಳಿಸುತ್ತಿದ್ದೇವೆ.
  4. ಸುಖಾಸೀನ ಹಾಗೂ ವೇಗವಾಗಿ ಚಲಿಸುವ ಪುಷ್ಪಕ್ ಬಸ್ಸುಗಳನ್ನು ಒದಗಿಸುತ್ತಿದ್ದೇವೆ.
  5. ಹಲವಾರು ಉದ್ದಿಮೆಗಳು, ಶಾಲೆಗಳು ಮತ್ತು ಕಾಲೇಜುಗಳಿಗೆ ಗುತ್ತಿಗೆ ಆಧಾರದ ಮೇಲೆ ವಾಹನಗಳ ಸೇವೆಯನ್ನು ಒದಗಿಸುತ್ತಿದ್ದೇವೆ.
  6. ಸಮಾಜದ ವಿವಿಧ ವರ್ಗದ ಜನತೆಗೆ ರಿಯಾಯಿತಿ ದರದಲ್ಲಿ ಸಾರಿಗೆ ಸೇವೆಯನ್ನು ನೀಡುತ್ತಿದ್ದೇವೆ.
  7. ಮಾಸಿಕ ಸಾಪ್ತಾಹಿಕ ಮತ್ತು ದೈನಿಕ ಪಾಸು ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ.
  8. ಪರಿಸರ ಸ್ನೇಹಿಯಾದ ಪರಿಸರ ವಾಹಿನಿ ವಾಹನಗಳನ್ನು ಪರಿಚಯಿಸಿದ್ದೇವೆ.
  9. ಅಧಿಕ ಪ್ರಯಾಣಿಕರು ಪ್ರಯಾಣಿಸಲು ಅನುಕೂಲವಾಗುವಂತಹ ಜಂಟಿ ವಾಹನ (ವೆಸ್ಟಿಬುಲ್ ವಾಹನ) ಗಳನ್ನು ಆಚರಣೆ ಮಾಡುತ್ತಿದ್ದೇವೆ.
  10. ನಗರ ಹೊರವಲಯದ ದೂರ ಸ್ಥಳಗಳಿಗೆ ಮಿನಿ ವಾಹನಗಳ ಸಂಚಾರವನ್ನು ಒದಗಿಸಲಾಗಿದೆ.
  11. ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ದಿ ಪಡಿಸಲು ವೋಲ್ವೊ ವಾಹನಗಳನ್ನು ಆಚರಣೆ ಮಾಡಲಾಗುತ್ತಿದೆ.
  12. ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಯು ವಜ್ರ ಬಸ್ಸುಗಳನ್ನು ಆಚರಣೆ ಮಾಡಲಾಗುತ್ತಿದೆ.
  13. ನಗರ ವೀಕ್ಷಣೆಗಾಗಿ ಕ್ಯೂರಿಟಿಬಾ ಮಾದರಿ ವಾಹನವನ್ನು ಒದಗಿಸಲಾಗಿದೆ.
ಪರಿಷ್ಕರಣೆ ಮಾಡಿದ ದಿನಾಂಕ : Thursday, 04 Nov 2010 04:25:05 PM

| ಮುಖಪುಟ | ಬಸ್ಸನ್ನು ಹುಡುಕಿ | ಬಸ್ ಪಾಸುಗಳು | ಲಾಟರಿ ಫಲಿತಾಂಶ | ಟೆಂಡರ್ | ಬಾಡಿಗೆ | ಉದ್ಯೋಗಾವಕಾಶ | ಪ್ರತ್ಯುತ್ತರ | ನಮ್ನನ್ನು ಸಂಪರ್ಕಿಸಿ |
Copyright © 2009 BMTC. All rights reserved. Powered By Bhasinsoft India Ltd.