ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ರಾಷ್ಟ್ರದಲ್ಲಿಯೇ ನಾಲ್ಕನೇ ಅತಿದೊಡ್ಡ ನಗರ ಸಾರಿಗೆ ಸಂಸ್ಥೆಯಾಗಿದೆ. ಸಂಸ್ಥೆಯ ಒಂದು ಪಕ್ಷಿನೋಟ ಈ ಕೆಳಗಿನಂತಿದೆ.
ಕ್ರಮ.ಸಂಖ್ಯೆ
ಕಾರ್ಯಗಾರಗಳು
1
ಕೇಂದ್ರೀಯ ಕಾರ್ಯಗಾರ-1, ಶಾಂತಿನಗರ
2
ಕೇಂದ್ರೀಯ ಕಾರ್ಯಗಾರ-2, ಕೆ.ಆರ್.ಪುರಂ
ಶಾಂತಿನಗರದಲ್ಲಿ ಮತ್ತು ಕೆ.ಆರ್.ಪುರಂನಲ್ಲಿ ಸ್ಥಾಪಿತವಾಗಿರುವ ಕೇಂದ್ರಿಯ ಕಾರ್ಯಗಾರದಲ್ಲಿ ಬಸ್ಸಿನ ಕವಚ ನಿರ್ಮಾಣ, ವಾಹನಗಳ ಪುನರ್ ನಿರ್ಮಾಣ ಮತ್ತು ಪುನರ್ ಸಂಸ್ಕರಣೆ ವ್ಯವಸ್ಥೆಯಂತಹ ಪ್ರಮುಖ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಹಾಲಿ ಬಸ್ ಘಟಕಗಳು
ಘಟಕ ಸಂಖ್ಯೆ
ಸ್ಥಳಗಳು
ಘಟಕ ಸಂಖ್ಯೆ
ಸ್ಥಳಗಳು
1
ಸಾಗಣೆ ನಿರ್ವಹಣಾ ಕೇಂದ್ರವನ್ನು (ಟಿ.ಟಿ.ಎಂ.ಸಿ)
ನಿರ್ಮಿಸಲಾಗುತ್ತಿದೆ)
19
ಎಲೆಕ್ಟ್ರಾನಿಕ್ ಸಿಟಿ
2
ಶಾಂತಿನಗರ
20
ಬನಶಂಕರಿ (ಸಂಚಾರ ಮತ್ತು ಸಾಗಣೆ ನಿರ್ವಹಣಾ ಕೇಂದ್ರವನ್ನು
(ಟಿ.ಟಿ.ಎಂ.ಸಿ) ನಿರ್ಮಿಸಲಾಗುತ್ತಿದೆ)
3
ಶಾಂತಿನಗರ
21
ರಾಜರಾಜೇಶ್ವರಿ ನಗರ
4
ಜಯನಗರ
22
ಪೀಣ್ಯ 2ನೇ ಹಂತ
5
ವಿಜಯನಗರ (ಸಂಚಾರ ಮತ್ತು ಸಾಗಣೆ ನಿರ್ವಹಣಾ ಕೇಂದ್ರವನ್ನು
(ಟಿ.ಟಿ.ಎಂ.ಸಿ) ನಿರ್ಮಿಸಲಾಗುತ್ತಿದೆ)
23
ಕಲ್ಯಾಣನಗರ
6
ಇಂದಿರಾನಗರ
24
ಐ.ಟಿ.ಐ, ಕೆ.ಆರ್.ಪುರಂ
7
ಸುಭಾಷ್ ನಗರ
25
ಹೆಚ್.ಎಸ್.ಆರ್. ಲೇಔಟ್
8
ಯಶವಂತಪುರ
26
ಯಶವಂತಪುರ
9
ಪೀಣ್ಯ 2ನೇ ಹಂತ
27
ಜಿಗಣಿ
10
ಹೆಣ್ಣೂರು
28
ಹೆಬ್ಬಾಳ
11
ಯಲಹಂಕ
29
ಕೆ.ಆರ್.ಪುರಂ
12
ಕೆಂಗೇರಿ
30
ಯಲಹಂಕ
13
ಕತ್ರಿಗುಪ್ಪೆ
31
ಶ್ರೀಗಂಧದ ಕಾವಲ್
14
ಆರ್.ಟಿ.ನಗರ
32
ಸೂರ್ಯ ಸಿಟಿ
15
ಕೋರಮಂಗಲ
33
ಪೂರ್ಣ ಪ್ರಜ್ಞ ಲೇಔಟ್
16
ದೀಪಾಂಜಲಿನಗರ
34
ಕೊತ್ತನೂರು ದಿಣ್ಣೆ
17
ಚಂದ್ರಾ ಲೇಔಟ್
35
ಕಣ್ಣಲ್ಲಿ
18
ಐ.ಟಿ.ಪಿ.ಎಲ್.(ವೈಟ್ ಫೀಲ್ಡ್)
36
ಬಿಡದಿ
ಟಿಪ್ಪಣಿ: ಘಟಕ ಸಂಖ್ಯೆ 1, 5, 20 ನ್ನು ಸ್ಥಗಿತಗೊಳಿಸಿದ್ದು, ಈ ಸ್ಥಳಗಳಲ್ಲಿ ಸಂಚಾರ ಮತ್ತು ಸಾಗಣೆ ನಿರ್ವಹಣಾ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.
ಬೆಂಗಳೂರು ಮಹಾನಗರದ ಮೂರು ಪ್ರಮುಖ ಸ್ಥಳಗಳಲ್ಲಿರುವ ಪ್ರಧಾನ ವಾಹನ ನಿಲ್ದಾಣಗಳು
1. ಸುಭಾಷ್ ನಗರ (ಮೆಜಸ್ಟಿಕ್ ಬಸ್ ನಿಲ್ದಾಣ ಎಂದು ಜನಪ್ರಿಯವಾಗಿರುವ ಕೆಂಪೇಗೌಡ ಬಸ್ ನಿಲ್ದಾಣ)
2. ಶಿವಾಜಿನಗರ (ಎಲ್ಲಾ ರೀತಿಯ ರಮ್ಯತೆ, ಉಪದಾರಿ, ಕಛೇರಿ ಸಂಕೀರ್ಣ, ವಾಹನ ನಿಲುಗಡೆ ಸ್ಥಳಾವಕಾಶ, ಮುಂತಾದವುಗಳಿಂದ ರೂಪಿತಗೊಂಡಿರುವ ನವೀನ ರೀತಿಯ ಬಸ್ ನಿಲ್ದಾಣ)
3. ಶಾಂತಿನಗರ (ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳೊಂದಿಗೆ ನವೀನ ಮಾದರಿಯ ಬಸ್ ನಿಲ್ದಾಣ)
ಕಿರಿಯ ವಾಹನ ನಿಲ್ದಾಣಗಳು: ನಗರದ ಈ ಕೆಳಕಂಡ ವಿವಿಧ ಬಡಾವಣೆಗಳಲ್ಲಿ ಸ್ಥಾಪಿಸಲಾಗಿದೆ.
4
ಬಿ.ಟಿ.ಎಂ.ಲೇಔಟ್
18
ಆರ್.ಪಿ.ಸಿ ಲೇಔಟ್
5
ಬಸವೇಶ್ವರನಗರ
19
ವಿದ್ಯಾರಣ್ಯಪುರ
6
ಚನ್ನಮ್ಮನಕೆರೆ ಅಚ್ಚುಕಟ್ಟು
20
ವಿವೇಕನಗರ
7
ಚಂದ್ರಾ ಲೇಔಟ್
21
ಯಲಹಂಕ
8
ಜೀವನಭೀಮಾನಗರ
22
ಯಲಹಂಕ ಉಪನಗರ 5 ನೇ ಹಂತ
9
ಕಾಡುಗೊಡಿ
23
ಪಿಲ್ಲಣ್ಣ ಗಾರ್ಡನ್
10
ಕಲ್ಯಾಣನಗರ
24
ಆಸ್ಟಿನ್ ಟೌನ್
11
ಕಾವಲ್ ಬೈರಸಂದ್ರ
25
ಕೆಂಗೇರಿ (ಟಿ.ಟಿ.ಎಂ.ಸಿಯನ್ನು ನಿರ್ಮಿಸಲಾಗುತ್ತಿದೆ )
12
ಕುಮಾರಸ್ವಾಮಿ ಲೇಔಟ್
26
ದೊಮ್ಮಲೂರು (ಟಿ.ಟಿ.ಎಂ.ಸಿಯನ್ನು ನಿರ್ಮಿಸಲಾಗುತ್ತಿದೆ )
13
ಮುನೇಶ್ವರ ಬ್ಲಾಕ್
27
ಬನಶಂಕರಿ (ಟಿ.ಟಿ.ಎಂ.ಸಿಯನ್ನು ನಿರ್ಮಿಸಲಾಗುತ್ತಿದೆ )
14
ಮಲ್ಲೇಶ್ವರಂ
28
ಯಶವಂತಪುರ (ಟಿ.ಟಿ.ಎಂ.ಸಿಯನ್ನು ನಿರ್ಮಿಸಲಾಗುತ್ತಿದೆ )
15
ನಂದಿನಿ ಲೇಔಟ್
29
ಜಯನಗರ
16
ನಾಗರಭಾವಿ
30
ವಿಜಯನಗರ (ಟಿ.ಟಿ.ಎಂ.ಸಿಯನ್ನು ನಿರ್ಮಿಸಲಾಗುತ್ತಿದೆ )
17
ರಾಜರಾಜೇಶ್ವರಿ ನಗರ
ಪ್ರಗತಿಯಲ್ಲಿರುವ ಬೃಹತ್ ಕಾಮಗಾರಿಗಳು
ಸಂಖ್ಯೆ
ಕೆಲಸದ ವಿವರ
ಅಂದಾಜು ಮೊತ್ತ ರೂ.ಲಕ್ಷಗಳಲ್ಲಿ
ಷರಾ
ಘಟಕಗಳು
1
ಕೊತ್ತನೂರು ದಿಣ್ಣೆಯಲ್ಲಿ ಬಸ್ ಘಟಕವನ್ನು ಉಪಕೆಲಸಗಳೊಂದಿಗೆ ನಿರ್ಮಿಸುವುದು.
490.00
ಮುಕ್ತಾಯವಾಗಿದೆ
2
ಮಾಗಡಿ ರಸ್ತೆ, ಕನ್ನಲ್ಲಿಯಲ್ಲಿ ಬಸ್ ಘಟಕವನ್ನು ಉಪಕೆಲಸಗಳೊಂದಿಗೆ ನಿರ್ಮಿಸುವುದು.
271.00
ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
3
ವರ್ತೂರು ಹೋಬಳಿ, ಸಿದ್ದಾಪುರದಲ್ಲಿ ಬಸ್ ಘಟಕವನ್ನು ಉಪಕೆಲಸಗಳೊಂದಿಗೆ ನಿರ್ಮಿಸುವುದು.
291.00
ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
4
ಬಿಡದಿಯ ಕೆ.ಐ.ಎ.ಡಿ.ಬಿ ನಿವೇಶನದಲ್ಲಿ ಬಸ್ ಘಟಕವನ್ನು (Pre-Engineering steel Building) ಉಪಕೆಲಸಗಳೊಂದಿಗೆ ನಿರ್ಮಿಸುವುದು.
353.00
ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
5
ಚಿಕ್ಕನಾಗಮಂಗಲದಲ್ಲಿ ಬಸ್ ಘಟಕವನ್ನು (Pre-Engineering steel Building) ಉಪಕೆಲಸಗಳೊಂದಿಗೆ ನಿರ್ಮಿಸುವುದು.
353.00
ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
6
ಹೊಸಕೋಟೆಯಲ್ಲಿ ಬಸ್ ಘಟಕವನ್ನು ಉಪಕೆಲಸಗಳೊಂದಿಗೆ ನಿರ್ಮಿಸುವುದು.
470.00
ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
7
ನೆಲಮಂಗಲ ಹೋಬಳಿ, ದಾಸನಪುರದಲ್ಲಿ ಬಸ್ ಘಟಕವನ್ನು ಉಪಕೆಲಸಗಳೊಂದಿಗೆ ನಿರ್ಮಿಸುವುದು.
278.50
ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
ಬಸ್ ನಿಲ್ದಾಣಗಳು
1
ಬಿಡದಿಯಲ್ಲಿ ಬಸ್ ನಿಲ್ದಾಣವನ್ನು ಉಪಕೆಲಸಗಳೊಂದಿಗೆ ನಿರ್ಮಿಸುವುದು.
200.00
ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
2
ಚಿಕ್ಕಮಾರನಹಳ್ಳಿಯಲ್ಲಿ ಬಸ್ ಶೆಲ್ಟರನ್ನು ನಿರ್ಮಿಸುವುದು.
41.00
ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
ಕಾಂಕ್ರೀಟಿಂಗ್ ಕಾಮಗಾರಿಗಳು
1
ಘಟಕ-30, ಯಲಹಂಕ ಆವರಣಕ್ಕೆ ಸಿಮೆಂಟ್ ಕಾಂಕ್ರೀಟ್ ಪೇವ್ಮೆಂಟ್ ಅಳವಡಿಸುವುದು.
241.00
ಕೆಲಸವು ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ.
2
ಅ) ಶ್ರೀಗಂಧದಕಾವಲ್ ಘಟಕ-31 ರ ಆವರಣಕ್ಕೆ ಸಿಮೆಂಟ್ ಕಾಂಕ್ರೀಟ್ ಪೇವ್ಮೇಂಟ್ ಅಳವಡಿಸುವುದು
ಆ) ಸೂರ್ಯಸಿಟಿ ಘಟಕ-32 ರ ಆವರಣಕ್ಕೆ ಸಿಮೆಂಟ್ ಕಾಂಕ್ರೀಟ್ ಪೇವ್ಮೇಂಟ್ ಅಳವಡಿಸುವುದು
432.00
ಕೆಲಸವು ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ.
ಇತರೆ ಕೆಲಸಗಳು
1
ವಡ್ಡರಹಳ್ಳಿಯಲ್ಲಿ ಚಾಲಕರ ತರಬೇತಿ ಕೇಂದ್ರ ನಿರ್ಮಿಸುವುದು
1000.00
ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
2
ಶಾಂತಿನಗರದಲ್ಲಿರುವ ಮುಖ್ಯ ಸಂಚಾರ ವ್ಯವಸ್ಥಾಪಕರ ಕಛೇರಿ ಇದ್ದಂತಹ ಹಳೆಯ ಕಟ್ಟಡದ ಮೊದಲ ಅಂತಸ್ತಿನಲ್ಲಿ ತರಬೇತಿ ಕೇಂದ್ರ ನಿರ್ಮಿಸುವುದು.
66.00
ಕೆಲಸವು ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ.
ಆಡಳಿತ ಮಾಹಿತಿ ಶಾಖೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಆಡಳಿತ ಮಾಹಿತಿ ವ್ಯವಸ್ಥೆಯು ಸಂಸ್ಥೆಯ ಸಂಪೂರ್ಣ ಅಂಕಿಸಂಖ್ಯೆ ಕೇಂದ್ರವಾಗಿದೆ. ಈ ಶಾಖೆಯು ಸಂಸ್ಥೆಯ ಎಲ್ಲಾ ಆಚರಣಾ ಅಂಕಿಅಂಶಗಳನ್ನು ತಯಾರಿಸಿ, ಕ್ರೋಡಿಕರಿಸಿ ದಾಖಲೆಗಳನ್ನು ಸಿದ್ದಪಡಿಸುತ್ತದೆ.ಆಡಳಿತ ಮಾಹಿತಿ ವ್ಯವಸ್ಥಾ ಶಾಖೆಯು ಎರಡು ಉಪ-ವಿಭಾಗಗಳನ್ನು ಹೊಂದಿದೆ. ಮೊದಲಿಗೆ, ಅಂಕಿಅಂಶಗಳ ವಿಭಾಗವು ಅಂಕಿಅಂಶದ ವರದಿಗಳನ್ನು ತಯಾರಿಸುವ ಕುರಿತಾದರೆ, ಗಣಕಯಂತ್ರಾ ವ್ಯವಸ್ಥಾ ವಿಭಾಗವು ಸಂಸ್ಥೆಯ ಎಲ್ಲಾ ಚಟುವಟಿಕೆಗಳನ್ನು ಗಣಕೀಕರಣಗೊಳಿಸುವುದಾಗಿದೆ.
ಭದ್ರತಾ & ಜಾಗೃತಾ ಶಾಖೆ
ಭದ್ರತಾ ಮತ್ತು ಜಾಗೃತಿ ಶಾಖೆಯು ಪೋಲಿಸ್ ಇಲಾಖೆಯ ಉಪ ಪೋಲಿಸ್ ಆಯುಕ್ತ (ಡಿ.ಐ.ಜಿ.) ದರ್ಜೆಯ ಸಂಸ್ಥೆಯ ನಿರ್ದೇಶಕರು (ಭದ್ರತಾ, ಜಾಗೃತಾ ಮತ್ತು ಪರಿಸರ), ಇವರ ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಶಾಖೆಯು ಸಂಸ್ಥೆಯ ಕಣ್ಣು ಮತ್ತು ಕಿವಿಗಳಂತೆ ಅತ್ಯಂತ ಜಾಗೂರೂಕತೆಯಿಂದ ಕೆಲಸ ಮಾಡುತ್ತದೆ. ಉಳಿದಂತೆ, ಸಂಸ್ಥೆಯ ಆಸ್ತಿ ಮತ್ತು ಸಂಸ್ಥೆಗೆ ಹೊರಗಿನವರಿಂದರಾಗಲಿ ಮತ್ತು ಸಂಸ್ಥೆಯ ಸಿಬ್ಬಂದಿಯವರಿಂದಾಗಲಿ ನಿಯಮ ಉಲ್ಲಂಘನೆ, ಕಳವು ಪ್ರಕರಣಗಳು, ಹಣದುರುಪಯೋಗ, ಬೆಂಕಿಅನಾಹುತದಂತಹ ಆಕಸ್ಮಿಕ ಘಟನೆಗಳಂತಹುಗಳಿಗೆ ಜೀವ ಸಂರಕ್ಷಣೆಯ ಭರವಸೆ ನೀಡುವಂತಹ ಇಲಾಖಾ ಕ್ರಮ ತೆಗೆದುಕೊಳ್ಳುವುದು ಶಾಖೆಯ ಮುಖ್ಯ ಕೆಲಸವಾಗಿರುತ್ತದೆ.
ತಾಂತ್ರಿಕ ಶಾಖೆ
ಸಂಸ್ಥೆಯು 34 ಘಟಕ ಹಾಗೂ 2 ಕೇಂದ್ರೀಯ ಕಾರ್ಯಾಗಾರಗಳಿಂದ ವಿವಿಧ ಮಾದರಿಯ ವಾಹನಗಳನ್ನು ಕಾರ್ಯಾಚರಣೆ ಮಾಡುತ್ತಿರುತ್ತದೆ.
ತಾಂತ್ರಿಕ ಇಲಾಖೆಯು ಸಂಸ್ಥೆಯ ಬೆನ್ನೆಲುಬಾಗಿರುತ್ತದೆ.
ಹೊಸ ಅನುಸೂಚಿಗಳ ಕಾರ್ಯಾಚರಣೆಗೆ ಹಾಗೂ ಹಳೆಯ ವಾಹನಗಳನ್ನು ಬದಲಾಯಿಸಲು ಬೇಕಾಗುವ
ವಾಹನಗಳನ್ನು ಉತ್ಪಾದಿಸುವಲ್ಲಿ ತಾಂತ್ರಿಕ ಇಲಾಖೆಯು ಪ್ರಮುಖ ಪಾತ್ರ ವಹಿಸುತ್ತದೆ.
ಸಂಸ್ಥೆಯು ವಿಶ್ವದರ್ಜೆಯ ಅಂತರಾಷ್ಟ್ರೀಯ ಮಟ್ಟದ ಲೋಪ್ಲೋರ್, ಲೋಎಂಟ್ರಿ, ಏರ್‌ಸಸ್ಪೆಷನ್ ಹಾಗೂ ನೀಲಿಂಗ್ ಮೆಕ್ಯಾನಿಸಂ ಹೊಂದಿರುವ ಹವಾನಿಯಂತ್ರಿತ ವೋಲ್ವೋ ವಾಹನಗಳನ್ನು ಕಾರ್ಯಾಚರಣೆ ಮಾಡುತ್ತಿರುತ್ತದೆ.
ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಹಾಗೂ ಬಾಗಿಲಿನ ಬಳಿ ಪ್ರಯಾಣಿಕರ ಗುಂಪುಗೂಡುವಿಕೆ ಹಾಗೂ ಕಿಸೆಗಳ್ಳತನ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಾಳಿಯ ಒತ್ತಡದಿಂದ ಕಾರ್ಯಾಚರಣೆಯಾಗುವ ಹಾಗೂ ಚಾಲಕನ ಅಧೀನದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಚಾಲಿತ ಬಾಗಿಲುಗಳ ವ್ಯವಸ್ಥೆ ಮಾಡಲಾಗಿರುತ್ತದೆ.
ಮಾರ್ಗಸೂಚಿ ನಾಮಫಲಕಗಳು ಪ್ರಯಾಣಿಕರಿಗೆ ಸುಲಭವಾಗಿ ಗೋಚರಿಸುವ ನಿಟ್ಟಿನಲ್ಲಿ ಸಂಸ್ಥೆಯು ಎಲ್.ಇ.ಡಿ (ಲೈಟ್ ಎಮಿಟಿಂಗ್ ಡಯೋಡ್) ನಾಮಫಲಕಗಳನ್ನು ವಾಹನಗಳಿಗೆ ಅಳವಡಿಸಲಾಗಿರುತ್ತದೆ.
ಬೆಂಗಳೂರು ನಗರದಲ್ಲಿ ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಸ್ಥೆಯು ತನ್ನ ವಾಹನ ಬಲವನ್ನು ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಬಿ.ಎಸ್ ದರ್ಜೆಗೆ ಉನ್ನತೀಕರಿಸಲಾಗುತ್ತಿದೆ. ಅದರಂತೆ ದಿನಾಂಕ 11/04/2005 ರಿಂದ ಬಿ.ಎಸ್-3 ಮಾದರಿಯ ವಾಹನಗಳನ್ನು ಮಾತ್ರ ಖರಿದಿಸುತ್ತಿರುತ್ತದೆ.
ಸಂಸ್ಥೆಯು ತನ್ನ ವಾಹನಗಳನ್ನು ಪ್ರತಿ ತಿಂಗಳು ಹೊಗೆ ತಪಾಸಣೆಗೆ ಒಳಪಡಿಸಿ ಹೊಗೆ ಹೊರಸೂಸುವ ಪ್ರಮಾಣವು ನಿಗದಿತ ಮಟ್ಟಕ್ಕೆ ಇರುವುದೆಂದು ಖಾತರಿಪಡಿಸಿಕೊಂಡು ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿರುತ್ತದೆ. ಸದರಿ ಕಾರ್ಯವು ವ್ಯವಸ್ಥಿತವಾಗಿ ನಿರ್ವಹಣೆಯಾಗಲು ಪ್ರತಿ ಘಟಕಕ್ಕೆ ಗಣಕಿಕೃತ ಹೊಗೆ ತಪಾಸಣಾ ಯಂತ್ರಗಳನ್ನು ಒದಗಿಸಲಾಗಿರುತ್ತದೆ.
ವಾಹನಗಳನ್ನು ತಾಂತ್ರಿಕವಾಗಿ ಸುಸ್ಥಿಯಲ್ಲಿರಿಸಿ ಕಾರ್ಯಾಚರಣೆ ಮಾಡಲು ಕೆಳಕಂಡ ಮುನ್ನೆಚ್ಚರಿಕಾ ನಿರ್ವಹಣಾ ಕಾರ್ಯಗಳನ್ನು ಅಳವಡಿಸಿಕೊಂಡಿರುತ್ತದೆ.
ದೈನಂದಿನ ನಿರ್ವಹಣೆ (ಪ್ರತಿ ದಿನ)
ದಿನ ಬಿಟ್ಟು ದಿನದ ನಿರ್ವಹಣೆ (2 ದಿನಗಳಿಗೊಮ್ಮೆ)
ಹತ್ತು ದಿನದ ನಿರ್ವಹಣೆ (ಪ್ರತಿ ಹತ್ತು ದಿನಗಳಿಗೆ)
ಡಾಕಿಂಗ್-1 (ಪ್ರತಿ 20 ಸಾವಿರ ಕಿ.ಮೀಗಳ ಕಾರ್ಯಾಚರಣೆಯ ನಂತರ)
ಡಾಕಿಂಗ್-2 (ಪ್ರತಿ 40 ಸಾವಿರ ಕಿ.ಮೀಗಳ ಕಾರ್ಯಾಚರಣೆಯ ನಂತರ)
ಡಾಕಿಂಗ್-3 (ಪ್ರತಿ 60 ಸಾವಿರ ಕಿ.ಮೀಗಳ ಕಾರ್ಯಾಚರಣೆಯ ನಂತರ)
ಡಾಕಿಂಗ್-4 (ಪ್ರತಿ 80 ಸಾವಿರ ಕಿ.ಮೀಗಳ ಕಾರ್ಯಾಚರಣೆಯ ನಂತರ)
ಸಂಸ್ಥೆಯು ನಾಲ್ಕು ಸಂಚಾರಿ ದುರಸ್ಥಿ ಕಾರ್ಯಾಗಾರ(ಮೊಬೈಲ್ ವರ್ಕ್ ಶಾಫ್)ಗಳನ್ನು ಹೊಂದಿದ್ದು ಅವುಗಳು ವಾಹನಗಳ ಅವಘಡದ ವಿಷಯ ತಿಳಿದ ಕೂಡಲೇ ಕಾರ್ಯೋನ್ಮುಖವಾಗಿ ದುರಸ್ಥಿ ಕಾರ್ಯವನ್ನು ನಿರ್ವಹಿಸುತ್ತಿರುತ್ತವೆ.