ಬಸ್ ಸೇವೆಗಳು  
ವೊಲ್ವೋ ವಾಯು ವಜ್ರ ವಿಮಾನ ನಿಲ್ದಾಣ ಸೇವೆಗಳು
ವೊಲ್ವೋ ವಜ್ರ ಸೇವೆಗಳು
ಬಿಗ್-೧೦ ಸೇವೆಗಳು
ಸುವರ್ಣ ಸೇವೆಗಳು
ಪುಷ್ಪಕ್ ಸೇವೆಗಳು
ವಿಶೇಷ ಸೇವೆಗಳು
ಸಾಮಾನ್ಯ ಸೇವೆಗಳು
ಮೆಟ್ರೊ ಫೀಡರ್ ಮತ್ತು ಇತರೆ ಸೇವೆಗಳು
     
ಸೇವಾಗುಣಮಟ್ಟ ನೀತಿ
ಬೆಂ.ಮ.ಸಾ.ಸಂಸ್ಥೆಯು ಪ್ರಯಾಣಿಕ ಸ್ನೇಹಿ ಸೇವೆಗಳನ್ನು ನೀಡಲು ವಿಶೇಷ ಪರಿಶ್ರಮ ಪಡುತ್ತಿದ್ದು, ಅದರೊಂದಿಗೆ ಆರ್ಥಿಕ ಮಿತವ್ಯಯಿ, ದಕ್ಷ, ಸ್ವಚ್ಛ, ಸಕಾಲಿಕ, ಸೌಜನ್ಯಯುತ, ಸುರಕ್ಷಿತ ಮತ್ತು ಕೈಗೆಟಕುವ ಸೇವೆಗಳನ್ನು ನೀಡಲು ವಚನ ಬದ್ಧವಾಗಿದೆ. ಪೂರೈಕೆದಾರರನ್ನು ತೊಡಗಿಸಿಕೊಂಡು ಮತ್ತು ಪರಿಸರ ಸ್ನೇಹಿ ಖರೀದಿ ಕಾರ್ಯನೀತಿಯ ಮೂಲಕ ಪ್ರಯಾಣಿಕ ಸಂತೃಪ್ತಿ ಮತ್ತು ಪ್ರಯಾಣಿಕರ ಮಾಹಿತಿ ವ್ಯವಸ್ಥೆಯನ್ನು ಜಾರಿಗೆ ತರುವುದು.

ಈ ಕೆಳಕಂಡ ಗುಣಮಟ್ಟದ ಯೋಜನೆಗಳು ಮೇಲಿನ ಕಾರ್ಯ ನೀತಿಯನ್ನು ಸಾಧಿಸಲು ಸಹಕಾರಿಯಾಗುವುದು.
  • ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣಾ ಪದ್ಧತಿಗಳ ಅಳವಡಿಕೆ.
  • ವಿಶ್ವಾಸಾರ್ಹ ಪ್ರಯಾಣಿಕ ನಿರ್ವಾಹಣಾ ಸಂಬಂಧ ಪದ್ಧತಿಗಳು.
  • ಗರಿಷ್ಠ ಕಾರ್ಯ ದಕ್ಷತೆ ಸಾಧಿಸುವುದು
  • ಅತ್ಯುತ್ತಮ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು.


ಪರಿಸರ ಕಾರ್ಯ ನೀತಿ



ಬೆಂ.ಮ.ಸಾ.ಸಂಸ್ಥೆಯು ಕರ್ನಾಟಕ ಸರ್ಕಾರದ ಅಧೀನ ಉದ್ದಿಮೆಯಾಗಿದ್ದು ಬೆಂಗಳೂರು ನಗರಕ್ಕೆ ಸಾರಿಗೆ ಪರಿಹಾರಗಳನ್ನು ಒದಗಿಸುತ್ತಿದ್ದು ಪರಿಸರ ಸ್ನೇಹಿ ಕಾರ್ಯಾಚರಣೆ ಒದಗಿಸಲು ಬದ್ಧವಾಗಿದೆ.
  • ಪರಿಸರ ನಿರ್ವಹಣೆ ವ್ಯವಸ್ಥೆಯ ಯೋಜನೆಯಲ್ಲಿ ಹಾಗೂ ಅನುಷ್ಠಾನದಲ್ಲಿ ಪ್ರಸ್ತುತವೆನಿಸುವ ಭಾಗೀದಾರರು ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು
  • ಪರಿಸರ ಸಂರಕ್ಷಣೆಯ ಅಭಿವೃದ್ಧಿಯಲ್ಲಿ ಸ್ವಯಂಪ್ರೇರಿತರಾಗಿ ಕೊಡುಗೆ ನೀಡುವಂತೆ ಸಂಸ್ಥೆಯು ಕಾರ್ಮಿಕರ ಮನವೊಲಿಸುತ್ತದೆ ಹಾಗೂ ತರಬೇತಿ ನೀಡುತ್ತದೆ
  • ನೈಸರ್ಗಿಕವಾಗಿ ಬಳಸಬಹುದಾದ ವಸ್ತುಗಳಿಗೆ ವಿಶೇಷ ಒತ್ತು ನೀಡಿ ತಾಂತ್ರಿಕ ಮಟ್ಟದ ಸುಧಾರಣೆ ಅಳವಡಿಸಿಕೊಂಡು ಪರಿಸರ ಸಂರಕ್ಷಣೆಯ ವಿಧಾನಗಳನ್ನು ನಿರಂತರವಾಗಿ ಪರಿಪಾಲಿಸಿ ಪರಿಸರ ಸ್ನೇಹಿ ಸಾರಿಗೆ ಕಾರ್ಯಾಚರಣೆಯನ್ನು ಮಾಡುವುದು
  • ಸಂಪನ್ಮೂಲಗಳ ಗರಿಷ್ಠ ಬಳಕೆಯ ಕ್ರಮಗಳನ್ನು ನಿರಂತರವಾಗಿ ಆಚರಣೆಯಲ್ಲಿ ತರುವುದು
ಪರಿಷ್ಕರಣೆ ಮಾಡಿದ ದಿನಾಂಕ : Thursday, 23 Jul 2009 03:11:04 PM

| ಮುಖಪುಟ | ಬಸ್ಸನ್ನು ಹುಡುಕಿ | ಬಸ್ ಪಾಸುಗಳು | ಲಾಟರಿ ಫಲಿತಾಂಶ | ಟೆಂಡರ್ | ಬಾಡಿಗೆ | ಉದ್ಯೋಗಾವಕಾಶ | ಪ್ರತ್ಯುತ್ತರ | ನಮ್ನನ್ನು ಸಂಪರ್ಕಿಸಿ |
Copyright © 2009 BMTC. All rights reserved. Powered By Bhasinsoft India Ltd.