ಬಸ್ ಸೇವೆಗಳು  
ವೊಲ್ವೋ ವಾಯು ವಜ್ರ ವಿಮಾನ ನಿಲ್ದಾಣ ಸೇವೆಗಳು
ವೊಲ್ವೋ ವಜ್ರ ಸೇವೆಗಳು
ಬಿಗ್-೧೦ ಸೇವೆಗಳು
ಸುವರ್ಣ ಸೇವೆಗಳು
ಪುಷ್ಪಕ್ ಸೇವೆಗಳು
ವಿಶೇಷ ಸೇವೆಗಳು
ಸಾಮಾನ್ಯ ಸೇವೆಗಳು
ಮೆಟ್ರೊ ಫೀಡರ್ ಮತ್ತು ಇತರೆ ಸೇವೆಗಳು
     
ಸಿಬ್ಬಂದಿ ಮಾಹಿತಿ

ಮಾನವ ಸಂಪನ್ಮೂಲ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ದಿನಾಂಕ 01.12.2004 ರಂದು ಅಸ್ತಿತ್ವಕ್ಕೆ ಬಂದು ಅಂದಿನಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.
 
1 ವಿವಿಧ ಕೌಶಲ್ಯಗಳಲ್ಲಿ ತರಬೇತಿ ಮತ್ತು ವ್ಯಕ್ತಿತ್ವ ವಿಕಸನದಂತಹ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬೆಂ.ಮ.ಸಾ.ಸಂಸ್ಥೆಯ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಗೊಳಿಸುವ ಮುಖ್ಯ ಉದ್ದೇಶವನ್ನು ಈ ಇಲಾಖೆ ಹೊಂದಿದೆ. ಅದಕ್ಕಾಗಿ ಸಿಬ್ಬಂದಿಯ ಪತಿ/ಪತ್ನಿ, ಮಕ್ಕಳನ್ನೂ ಸಹ ಸಂಸ್ಥೆಯ ಮಾನವ ಸಂಪನ್ಮೂಲ ಪರಿಧಿಯೊಳಗೆ ಒಳಪಡಿಸಲಾಗಿದೆ.

2 ವೃತ್ತಿ ಸಂಬಂಧಿತ ಕೆಲಸದಲ್ಲಿ ನೈಪುಣ್ಯತೆ ತರುವ ಉದ್ದೇಶದಿಂದ ಇಲಾಖೆ ಹಲವು ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಅವುಗಳಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳಿಗೆ ಪುನಶ್ಚೇತನ ತರಬೇತಿ, ಸಿಬ್ಬಂದಿಯಲ್ಲಿ ಉತ್ತಮ ನಡವಳಿಕೆ ರೂಪಿಸಲು ವ್ಯಕ್ತಿತ್ವ ವಿಕಸನದಂತಹ ವಿಶೇಷ ತರಬೇತಿ ಕಾರ್ಯಕ್ರಮಗಳು, ಶಾರೀರಿಕ ಸದೃಢತೆ ಮತ್ತು ಮಾನಸಿಕ ಆರೋಗ್ಯ ಸ್ಥಿರತೆಯ ಸಲುವಾಗಿ ಯೋಗ ಮುಂತಾದ ತರಬೇತಿ ಕಾರ್ಯಕ್ರಮಗಳನ್ನು  ಇಲಾಖೆ ನೀಡುತ್ತಿದೆ.

3 2007-08 ರ ಸಾಲಿನಲ್ಲಿ ಒಟ್ಟು 16,695 ಸಿಬ್ಬಂದಿಗೆ ಮೇಲೆ ತಿಳಿಸಿದ ವಿಷಯಗಳಲ್ಲಿ ತರಬೇತುಗೊಳಿಸಲಾಗಿದೆ. ಅದರಲ್ಲಿ ಹೊಸದಾಗಿ ಆಯ್ಕೆಗೊಂಡ 4354 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮತ್ತು 2008-2009 ಸಾಲಿನಲ್ಲಿ ಒಟ್ಟು 16,709 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅದರಲ್ಲಿ 4980 ಹೊಸದಾಗಿ ಆಯ್ಕೆಗೊಂಡ ಸಿಬ್ಬಂದಿಯು ಒಳಗೊಂಡಿದೆ.

4 ಸಂಸ್ಥೆಯ ಮಹಿಳಾ ಸಿಬ್ಬಂದಿಗೆ ಕಾರ್ಯನಿರ್ವಹಿಸುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಕುರಿತು ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

5 ಸಾರ್ವಜನಿಕ ಸಾರಿಗೆ ಕುರಿತು ಇಲಾಖೆ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿ, ಆ ಸಾಕ್ಷ್ಯ ಚಿತ್ರವನ್ನು ಭಾರತದ ಎಲ್ಲಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಒದಗಿಸಿ ಸದರಿ ಚಿತ್ರದ ಕೇಂದ್ರ ವಿಷಯವನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದೆ. ಖ್ಯಾತ ಕನ್ನಡ ಚಲನಚಿತ್ರ ರಂಗದ ನಟರಾದ ಶ್ರೀ ರಮೇಶ್ ಮತ್ತು ತಾರಾರವರು ಈ ಸಾಕ್ಷ್ಯ ಚಿತ್ರದಲ್ಲಿ ನಿರೂಪಕರಾಗಿ ವಿಷಯ ನಿರೂಪಿಸಿದ್ದಾರೆ.

6 ಏಪ್ರಿಲ್-2009 ರಂದು 25 ದಿನಗಳ ಕಾಲ ಸಂಸ್ಥೆಯ ಸಿಬ್ಬಂದಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು. ಸದರಿ ಶಿಬಿರದಲ್ಲಿ 180 ಮಕ್ಕಳು ಭಾಗವಹಿಸಿದ್ದರು. ಜೊತೆಗೆ ಮಕ್ಕಳಿಗಾಗಿ ಪರೀಕ್ಷಾ ಪೂರ್ವ ಸಿದ್ಧತಾ ಶಿಬಿರವನ್ನು ಆಯೋಜಿಸಲಾಗಿತ್ತು. ಜೊತೆಗೆ ಭಾರತೀಯ ವಿಜ್ಞಾನ ಸಂಸ್ಥೆ (IISC) ಯವರಿಂದ ಕಿಶೋರ್ ವೈಜ್ಞಾನಿಕ ಪ್ರೋತ್ಸಾಹನ ಯೋಜನಾ-೨೦೦೯ ರ ಕುರಿತು ಮಾಹಿತಿಯನ್ನೂ ಒದಗಿಸಲಾಗಿದೆ.

7 ಸಂಸ್ಥೆ ತನ್ನ ಸಾಮಾಜಿಕ ಜವಾಬ್ದಾರಿಯನ್ನರಿತು ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ, ಹಗುರ ವಾಹನ ಚಾಲನಾ ಪರವಾನಗಿ (LMV) ಹೊಂದಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ನಿರುದ್ಯೋಗಿ ಯುವಕರಿಗೆ ಉಚಿತವಾಗಿ ಭಾರಿ ವಾಹನ ಚಾಲನಾ (HPV) ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದರಂತೆ 54 ಜನ ಅಬ್ಯರ್ಥಿಗಳು ೨೦೦೮-೦೯ ರಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಮತ್ತು ತರಬೇತಿ ಹೊಂದಿದ ಅಭ್ಯರ್ಥಿಗಳಿಗೆ ಆರ್.ಟಿ.ಓ (HPV) ಲೈಸನ್ಸ್‌ಗಳನ್ನು ನೀಡಿದೆ. ಹಾಗೆ ತರಬೇತಿ ಹೊಂದಿದ ಸಾಕಷ್ಟು ಅಭ್ಯರ್ಥಿಗಳು ಬಿ.ಎಂ.ಟಿ.ಸಿ. ಮತ್ತು ಕೆ.ಎಸ್.ಆರ್.ಟಿ.ಸಿ. ಯಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.

8 ಬಿ.ಎಂ.ಟಿ.ಸಿ. ಮತ್ತು ಕೆ.ಎಸ್.ಆರ್.ಟಿ.ಸಿ. ಯಲ್ಲಿ ಉದ್ಯೋಗ ಅರಸಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂಸ್ಥೆಯಲ್ಲಿ ಚಾಲನಾ ವೃತ್ತಿ ಪರೀಕ್ಷೆ ಪೂರ್ವ ಸಿದ್ಧತಾ ತರಬೇತಿಯನ್ನು ನೀಡಲಾಗುತ್ತಿದೆ.
 
9 ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆವತಿಯಿಂದ ಬರುವಂತಹ  ಪರಿಶಿಷ್ಠ ಜಾತಿ ನಿರುದ್ಯೋಗಿ ಅಭ್ಯರ್ಥಿಗಳಿಗೆ ಸರ್ಕಾರದ ನವಚೇತನ ಯೋಜನೆಯಡಿಯಲ್ಲಿ 2008-09 ರಲ್ಲಿ 62 ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿಯನ್ನು ನೀಡಲಾಗಿದ್ದು, ಆರ್.ಟಿ.ಓ ದಿಂದ ಲೈಸನ್ಸ್‌ನ್ನು ನೀಡಲಾಗಿದೆ. 

ಪರಿಷ್ಕರಣೆ ಮಾಡಿದ ದಿನಾಂಕ : Tuesday, 17 Nov 2009 04:53:25 PM

| ಮುಖಪುಟ | ಬಸ್ಸನ್ನು ಹುಡುಕಿ | ಬಸ್ ಪಾಸುಗಳು | ಲಾಟರಿ ಫಲಿತಾಂಶ | ಟೆಂಡರ್ | ಬಾಡಿಗೆ | ಉದ್ಯೋಗಾವಕಾಶ | ಪ್ರತ್ಯುತ್ತರ | ನಮ್ನನ್ನು ಸಂಪರ್ಕಿಸಿ |
Copyright © 2009 BMTC. All rights reserved. Powered By Bhasinsoft India Ltd.